ಬಾಗಲಕೋಟೆ: ಗಣೇಶ ಹಬ್ಬದ ಅದ್ದೂರಿ ಆಚರಣೆಗೆ ಪೊಲೀಸರು ಅವಕಾಶ ಮಾಡಿಕೊಡಬೇಕು. ಅನಗತ್ಯವಾಗಿ ಯುವಕರನ್ನು ಠಾಣೆಗೆ ಕರೆತಂದು ಕೂಡಿಸುವುದು ಖಂಡನಾರ್ಹ ಎಂದು ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಹುನಗುಂದ, ಇಳಕಲ್, ಬಾದಾಮಿ ಸೇರಿದಂತೆ ಕೆಲವಡೆ ಪೊಲೀಸರು ಯುವಕರನ್ನು ಕರೆತಂದು ಠಾಣೆಗಳಲ್ಲಿ ಕೂಡಿಸಿದ್ದಾರೆ. ಇದು ತಪ್ಪು, ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಅವರು ಆಗ್ರಹಿಸಿದರು.
ಡಿಕೆಶಿ ಕ್ಷಮೆಗೆ ಒತ್ತಾಯ:
ಮೈಸೂರು ದಸರಾ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಚಾಮುಂಡೇಶ್ವರಿ ದೇವಸ್ಥಾನ ಕುರಿತು ನೀಡಿರುವ ಹೇಳಿಕೆ ಖಂಡಸಿದ ಶಾಂತಗೌಡರು, ಈ ವಿಷಯದಲ್ಲಿ ಡಿ.ಕೆ. ಶಿವಕುಮಾರ ಅವರು ಕ್ಷಮೆ ಯಾಚನೆ ಮಾಡದಿದ್ದರೆ ಬಿಜೆಪಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸತ್ಯನಾರಾಯಣ ಹೇಮಾದ್ರಿ ಮಾತನಾಡಿದರು. ರಾಜು ನಾಯ್ಕರ, ಮುತ್ತು ಉಳ್ಳಾಗಡ್ಡಿ, ಶಿವು ಸುರಪುರ, ಕಾಂತಿಚಂದ ಜ್ಯೋತಿ ಇದ್ದರು.




