ಸೆ.1. ರಂದು ಧರ್ಮಸ್ಥಳ ಚಲೋ: ಶಾಂತಗೌಡ

ಬಾಗಲಕೋಟೆ: ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ, ಶ್ರೀಕ್ಷೇತ್ರ ಧರ್ಮಸ್ಥಳ ಬೆಂಬಲಾರ್ಥವಾಗಿ ಸೆಪ್ಟಂಬರ್ 1 ರಂದು ಹಮ್ಮಿಕೊಡೊರುವ ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಜನತೆ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಿಂದ ೧೦೦ ವಾಹನಗಳ ಮೂಲಕ ೫ ಸಾವಿರ‌ ಜನ ಭಾಗವಹಿಸುವರುಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಅಪೇಕ್ಷೆಯಂತೆ “ಹಿಂದೂ ಧರ್ಮದ ಬಾವುಟದೊಂದಿಗೆ “ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು, ಕ್ಷೇತ್ರ ಧರ್ಮಸ್ಥಳದ ಭಕ್ತ ವೃಂದ ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅವರು ಮಾಡಿದರು.

ಸತ್ಯನಾರಾಯಣ ಹೇಮಾದ್ರಿ ಮಾತನಾಡಿದರು. ರಾಜು‌ ನಾಯ್ಕರ, ಮುತ್ತು ಉಳ್ಳಾಗಡ್ಡಿ, ಶಿವು ಸುರಪುರ, ಕಾಂತಿಚಂದ ಜ್ಯೋತಿ ಇದ್ದರು.

Scroll to Top