ಬಾಗಲಕೋಟೆ: ಹಿಂದೂಸ್ಥಾನದಲ್ಲಿರುವವರೆಲ್ಲ ಕಡ್ಡಾಯವಾಗಿ ಜಾತಿ ಜನಗಣತಿಯ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸಿರಿ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ಯುವ ಮೋರ್ಚಾದಿಂದ ಹಮ್ಮಿಕೊಂಡ ನಮೋ ಮ್ಯಾರಥಾನ್ ಹಾಗೂ ಜಿ.ಎಸ್.ಟಿ ಸಂಭ್ರಮಾಚಾರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಗರಿಕ ಹಿತವನ್ನು ಬಯಸುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆಶಾಕಿರಣವಾಗಿದ್ದು, ತೆರಿಗೆಯನ್ನು ಇಳಿಸುವುದ ಮೂಲಕ ಬಡವರಿಗೆ ಆಗುವ ಹೊರೆಯನ್ನು ಕಡಿಮೆ ಮಾಡುವ ಮೂಲಕ ನವರಾತ್ರಿಗೆ ವಿಷೇಷ ಕೊಡುಗೆಯನ್ನು ನೀಡಿದ್ದಾರೆ. ಜಿ.ಎಸ್.ಟಿ ಯ ಬಗ್ಗೆ ಜನರಿಗೆ ಕಾರ್ಯಕರ್ತರಯ ತಿಳುವಳಿಕೆ ನೀಡಬೇಕು ಎಂದರು.
ಜನವರಿಯಿಂದ ಜಾತಿ ಜನಗಣತಿ:
ಕೇಂದ್ರದಿಂದ ಜನವರಿ ತಿಂಗಳಿಂದ ಜಾತಿ ಜನಗಣತಿ ಪ್ರಾರಂಭವಾಗಲಿದೆ, ರಾಜ್ಯದಲ್ಲಿ ಸಿದ್ರಾಮಯ್ಯನವರ ಸರಕಾರ ನಡೆಸುತ್ತಿರುವ ಜಾತಿ ಗಣತಿ ಎಲ್ಲ ಧರ್ಮ ಜಾತಿಗಳಲ್ಲಿ ಒಡಕು ತಂದು ಸಮಾಜ ಒಡೆಯುವ ಜನಗಣತಿಯಾಗಿದೆ, ದೇವರಾಜ ಅರಸುಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಬೇಕು ಎಂಬ ಆಶಯನ್ನಿಟ್ಟುಕೊಂಡು ರಾಜ್ಯದಲ್ಲಿ ಧರ್ಮ ಜಾತಿ ಒಡೆಯುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿತ್ತಿದ್ದಾರೆ ಎಂದು ಅವರು ದೂರಿದರು.
ಹಿಂದುಗಳೆಂದು ಬರೆಯಿಸಿ:
ಕೇಂದ್ರದಿಂದ ಜನವರಿಯಿಂದ ಪ್ರಾರಂಭವಾಗುವ ಜನಗಣತಿ ಅಧಿಕೃತವಾಗಿದ್ದು ಅದರಲ್ಲಿ ಎಲ್ಲರೂ ಕಡ್ಡಾಯವಾಗಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಿರಿ, ಜಾತಿ ಕಾಲಂನಲ್ಲಿ ನಮ್ಮ ನಮ್ಮ ಜಾತಿಗಳನ್ನು ಉಪಜಾತಿಗಳಲ್ಲಿ ಬರೆಯಿಸುವ ಮೂಲಕ ಹಿಂದೂಸ್ಥಾನದಲ್ಲಿರುವವರು ಹಿಂದೂಗಳೆಂಬುದನ್ನು ಸಾಬೀತಪಡಿಸಬೇಕು ಎಂದರು.
ರಾಜ್ಯಸಭಾ ಸದಸ್ಯ ನಾರಾಯಾಣಸಾ ಭಾಂಡಗೆ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು.
ನಮೋ ಮ್ಯಾರಥಾನ :
ಬೀಳೂರ ಅಜ್ಜನ ಗುಡಿಯಿಂದ ಬಸವೇಶ್ವರ ವೃತ್ತದ ವರೆಗೂ ನಮೋ ಮ್ಯಾರಥಾನ ನಡಿಗೆ ಎಲ್ಲರ ಗಮನ ಸೇಳೆಯಿತು. ಬಸವೇಶ್ವರ ವೃತ್ತದಲ್ಲಿ ಜಿ.ಎಸ್.ಟಿ ಇಳಿಕೆಯ ಸಂಭ್ರಮವನ್ನು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.
ಜಿ.ಎನ್.ಪಾಟೀಲ. ಲಕ್ಷ್ಮೀನಾರಾಯಣ ಕಾಸಟ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ರಾಜು ರೇವಣಕರ್, ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ರವಿ ಕೋಟೆನ್ನವರ, ನಗರಸಭೆ ಅಧ್ಯಕ್ಷೆ ಸವೀತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ, ಸದಸ್ಯರಾದ ರೇಖಾ ಕಲಬುರಗಿ, ಶಶಿಕಲಾ ಮಜ್ಜಗಿ, ಪ್ರೇಮಾ ಅಂಬಿಗೇರ, ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ನಗರ ಮಂಡಲ ಅಧ್ಯಕ್ಷ ಬವರಾಜ ಹುನಗುಂದ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೋಣ್ಣೂರ, ಉಮೇಶ ಹಂಚಿನಾಳ,ಶ್ರೀಧರ ನಾಗರಬೆಟ್ಟ, ಸಂಗಯ್ಯ ಸರಗಣಾಚಾರಿ. ಸುರೇಶ ಮಜ್ಜಗಿ, ರಾಜು ಗಾಣಿಗೇರ ಸೇರಿದಂತೆ ಅನೇಕ ಜನ ಕಾರ್ಯಕರ್ತರು ಭಾಗವಹಿಸಿದ್ದರು.




