ಬಾಗಲಕೋಟೆ: ಜನರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಹಾಗೂ ಜೀವ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿ ಎಂದು ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಬಾಗಲಕೋಟೆ ತಾಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಿ ಅವರು ಮಾತನಾಡಿದರು.
ರಸ್ತೆ ಸುರಕ್ಷತೆ ವಿಷಯದಲ್ಲಿ ಕಾನೂನಿನ ನಿಯಮಗಳನ್ನು ಜಾರಿಗೆ ತರುವಲ್ಲಿ ನಮ್ಮದು ಸಂಪೂರ್ಣ ಸಹಕಾರವಿದೆ, ಆದರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂತ್ರಸ್ತರು ಜಾಸ್ತಿ ಇರುವುದರಿಂದ ಮತ್ತು ಆರ್ಥಿಕ ಸಮಸ್ಯೆ ಇರುವುದರಿಂದ, ದಂಡವನ್ನು ಕನಿಷ್ಠಮೊತ್ತಕ್ಕೆ ಇಳಿಸಿರಿ. ದಂಡವನ್ನು ವಿಧಿಸಿ ಭಯಪಡಿಸುವುದಕ್ಕಿಂತ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಿ, ಅವರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಹಾಗೂ ಜೀವ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿರಿ ಎಂದರು.
ಬಾಗಲಕೋಟೆ ತಾಲೂಕ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು, ಕೃಷ್ಣಾ ಖಾಕಂಡಕಿ, ಸುನೀಲ ಅಂಭೋರೆ, ಶಂಕರಗೌಡ ಪಾಟೀಲ, ರಾಜು ನಾಯ್ಕರ, ರಾಜು ರೇವಣಕರ, ಸತ್ಯನಾರಾಯಣ ಹೇಮಾದ್ರಿ, ಬಸವರಾಜ ಯಂಕAಚಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶರಧಗೌಡ ಪಾಟೀಲ, ಶ್ರೀಧರ ನಾಗರಬೇಟ್ಟ, ಸುರೇಶ ಮಜ್ಜಗಿ, ಸಂತೋಷ ರಾಥೋಡ, ಸಂಧೀಪ ಚೌವಾಣ್ಹ, ನಾಗರಾಜ ನಾರಾಯಣಕರ, ರಾಜು ಕೋಟಿಕಲ್, ಮಲ್ಲು ಮುತ್ತಪ್ಪನ್ನವರ, ವೆಂಕಟೇಶ ರಾವ, ರಾಜು ಗಾಣಿಗೇರ, ಮಾಲಿಂಗ ವಡ್ಡರ, ಕಾಂತು ಖಾತೆಧಾರ, ಆನಂದ ಕೋಟಗಿ, ಸಂತೋಷ ಜೋಶಿ, ವಿಶ್ವನಾಥ ಹಿರೇಮಠ ಸೇರಿದಂತೆ ಅನೇಕರು ಇದ್ದರು.




