ಕಾಂಗ್ರೆಸ್ಸಿನಿಂದ ಜಾತಿ ಗೊಂದಲ ಸೃಷ್ಟಿ: ಚರಂತಿಮಠ

ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲ ಜಾತಿ, ಧರ್ಮದ ಗೊಂದಲ ಇದ್ದೆ ಇರುತ್ತದೆ. ಈಗಲೂ ಅದು‌ ಮುಂದುವರಿದಿದೆ. ಜಾತಿ ಗೊಂದಲ ಸೃಷ್ಟಿಗೆ ಕಾಂಗ್ರೆಸ್ ಕಾರಣ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ಇಲ್ಲಿನ ಬಿವಿವಿ ಸಂಘದ ಸಭಾ‌ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೊದಲು ವೀರಶೈವ‌ ಮಹಾಸಭಾ ಇದ್ದದ್ದು, ಭಕ್ತರ ಸಲಹೆಯ ಮೆರೆಗೆ ವೀರಶೈವ / ಲಿಂಗಾಯತ ಮಹಾಸಭಾ ಮಾಡಲಾಗಿದೆ. ಕಾಂಗ್ರೆಸ್ಸಿನಿಂದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಡೆಯೊದು ಜಾತಿ, ಕೂಡಿಸುವುದು ಧರ್ಮ ಎಂದ ಅವರು ಅರಸು ಕಾಲದಲ್ಲಿ ಗೊಂದಲ ಶುರುವಾಗಿದೆ.

ಬಸವ ಸಂಸ್ಕೃತಿ ಉತ್ಸವ ನಾವೇ ಮಾಡಲು ಉದ್ದೇಶಿಸಿದ್ದೇವು. ಆದರೆ ಅವರ ಉದ್ದೇಶ ಬೇರೆ ಆಗಿತ್ತು. ಹಾಗಾಗಿ ನಮ್ಮ ಕಡೆ ಅವರು‌ ಬರಲಿಲ್ಲ ಎಂದರು.

ಒಂದು ಕಾಲದಲ್ಲಿ 6 ಧರ್ಮಗಳನ್ನು ಮಾಡಿದ್ದರು. ಈಗ ಧರ್ಮದ ಕಾಲಂ ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಹೊಸ ಧರ್ಮ ಕೊಡುವ ಸ್ಥಿತಿಯಲ್ಲಿ ಇಲ್ಲ ಎಂದರು.

ಸೆ.19 ರಂದು ಸಮಾವೇಶ:

ಅಖಿಲ ಭಾರತ ವಿರಶೈವ ಲಿಂಗಾಯತ ಮಹಾಸಭೆಯ‌ ಸಮಾವೇಶ ಸೆ.19 ರಂದು ಹುಬ್ಬಳ್ಳಿಯ‌ ನೆಹರು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದು ಕೆರೂರ ಚರಂತಿಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾ‌ಭವನದಲ್ಲಿ‌ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು ಸಮಾವೇಶದಲ್ಲಿ ಈಶ್ವರ ಖಂಡ್ರೆ, ಜಗದೀಶ‌ ಶೆಟ್ಟರ,ವೀರಣ್ಣ ಚರಂತಿಮಠ, ರಾಜ್ಯದ ಭಕ್ತರು ಸೇರಿದಂತೆ ಆಂಧ್ರ ಪ್ರದೇಶ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಿಂದ ೧ ಲಕ್ಷ ಜನ‌ಸೇರುವ ನಿರೀಕ್ಷೆ ಇದೆ. ೫ -೬ ನೂರು‌ ಜನ‌ ಸ್ವಾಮೀಜಿಗಳು ಭಾಗವಹಿಸಿದ್ದಾರೆ ಎಂದರು.

ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ವೇಳೆ ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಿಸುವಂತೆ ಅವರು‌ ಮನವಿ ಮಾಡಿದರು.

ರಾಜ್ಯದಲ್ಲಿ ೨ ಕೋಟಿ ಜನ:

ರಾಜ್ಯದಲ್ಲಿ ೨ ಕೋಟಿ‌‌ ಜನಸಂಖ್ಯೆ ನಮ್ಮ ಸಮುದಾಯದ್ದಿದೆ. ದೇಶದಲ್ಲಿ‌ ೫ ರಿಂದ ೬ ಕೋಟಿ ಇದ್ದೇವೆ ಎಂದು ಅವರು ತಿಳಿಸಿದ ಕಮತಗಿ ಹುಚ್ಚೇಶ್ವರಮಠದ ಹೋಳೆಹುಚ್ಚೇಶ್ವರಶ್ರೀಗಳು‌, ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ನಡೆಯಲಿದೆ. ಎಲ್ಲರೂ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು. ಈ‌ ಸಮಾವೇಶದಲ್ಲಿ ಗಣತಿ ಕಾರ್ಯದ ಕುರಿತು ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದರು.

ಬಿಲ್ ಕೆರೂರ ಬಿಲ್ವಾಶ್ರಮ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಕುಂದರಗಿ ಚರಂತಿಮಠದ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಬೀಳಗಿ ಕಲ್ಮಠದ ಶ್ರೀ ಗುರುಪಾದ ಶಿವಾಚಾರ್ಯರು, ಗುಳೇದಗುಡ್ಡ ಮುರಘಾಮಠದ ಕಾಶಿನಾಥ ಸ್ವಾಮಿಗಳು, ಗಿರಿಸಾಗರ ಕಲ್ಯಾಣಮಠದ ಶ್ರೀ ರುದ್ರಮುನಿ ಶಿವಾಚಾರ್ಯರು, ಗುರುಲಿಂಗ ಶಿವಾಚಾರ್ಯರು, ಗುಳೇದಗುಡ್ಡ ಮುರಘಾಮಠದ ಶ್ರೀ ಕಾಶಿನಾಥ ಸ್ವಾಮಿಗಳು, ಅಮಿನಗಡದ ಶ್ರೀ ಶಂಕರ ಪ್ರಭು ರಾಜೇಂದ್ರ ಸ್ವಾಮಿಗಳು , ವೀರಣ್ಣ ಚರಂತಿಮಠ, ಜಿ. ಎನ್. ಪಾಟೀಲ, ಮಹೇಶ ಅಥಣಿ, ಬಸವರಾಜ್ ಭಗವತಿ, ಬಸವರಾಜ ಮುಕುಪಿ ಇದ್ದರು.

Scroll to Top