ಒಂದು ಎನ್ನುವವರ ಪರವಾಗಿದ್ದೇವೆ: ಚರಂತಿಮಠ

ಬಾಗಲಕೋಟೆ: ವೀರಶೈವ-ಲಿಂಗಾಯತರೆಲ್ಲ ಒಂದು ಎನ್ನುವವರ ಪರ ನಾವಿದ್ದೇವೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹೊತ್ತು ಬಂದಂತೆ ಮಾತನಾಡುವವರಿಗೆ ನಾವು ಏನೂ ಉತ್ತರ ಕೊಡಲು ಸಾಧ್ಯವಿಲ್ಲ. ದೇಶವ್ಯಾಪ್ತಿಯಲ್ಲಿರುವ ನಾವು ಹಿಂದುಗಳು, ಧರ್ಮದಲ್ಲಿ ವೀರಶೈವ – ಲಿಂಗಾಯತರು ಎಂದರು.

ಹುಬ್ಬಳ್ಳಿಯಲ್ಲಿ ನಡೆಯಲಿರುವ ವೀರಶೈವ -ಲಿಂಗಾಯತ ಮಹಾಸಭಾ ಸಮಾವೇಶಲ್ಲಿ‌ಕೈಗೊಳ್ಳುವ ನಿರ್ಣಯಕ್ಕೆ ಬದ್ದವಿರುವುದಾಗಿ ಅವರು ತಿಳಿಸಿದರು.

ಲಾಭದಲ್ಲಿ ಬೀಳೂರ ಸಹಕಾರಿ ಸಂಘ:

ಶ್ರೀ ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ ೧,೯೨ ಕೋಟಿ ರೂ.‌ಲಾಭಗಳಿಸಿದೆ ಎಂದು ಅವರು ಹೇಳಿದರು.

ಸಂಘ ಆರಂಭದಿಂದಲೂ ಲಾಭದಲ್ಲಿದ್ದು, ಪ್ರತಿವರ್ಷ ಶೇ. ೧೫ ರಷ್ಟು ಲಾಭಾಂಶ ನೀಡುತ್ತ ಬಂದಿದೆ. ಈ ವರ್ಷವೂ ಶೇ.೧೫ ರಷ್ಟು ಲಾಭ ನೀಡಲು ಆಡಳಿತ‌ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು.

ಸಾಲ ವಿತರಣೆ:

ಸಂಘದ ಎಲ್ಲ ಶಾಖೆಗಳು ಲಾಭದಲ್ಲಿವೆ. ಬಾಗಲಕೋಟೆ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ವಿವಿಧ ತೆರನಾದ ಸಾಲಗಳನ್ನು ವಿತರಿಸಿದೆ. ಸದಸ್ಯರೂ ಸರಿಯಾದ ಸಮಯಕ್ಕೆ ಮರುಪಾವತಿಸಿದ್ದಾರೆ ಎಂದರು.
ರಾಜ್ಯವಾಪಿ ತನ್ನ ಕಾರ್ಯಕ್ಷೇತ್ರ ಹೊಂದಿರುವ ಸಂಘವು ಆರಂಭದಲ್ಲಿ ಕೇವಲ ೧೦೦೦ ಸಾವಿರ ಸದಸ್ಯರೊಂದಿಗೆ ಪ್ರಾರಂಭವಾಗಿದ್ದು, ಇಂದು ೭೧೭೭ ಸದಸ್ಯರನ್ನು‌ ಹೊಂದಿದೆ.

ಸಂಘದ ಸ್ಥಿತಿ:

೨೦ ಲಕ್ಷ ಶೇರು‌ ಬಂಡವಾಳದಿಂದ ಆರಂಭವಾದ ಸಂಸ್ಥೆ ಇಂದು ೩.೭೪ ಕೋಟಿ ಶೇರು‌ ಬಂಡವಾಳ ಹೊಂದಿದೆ. ೩೨೧.೯೮ ಕೋಟಿ ರೂ. ದುಡಿಯುವ ಬಂಡವಾಳ, ೨೯.೯೩ ಕೋಟಿ ರೂ. ನಿಧಿಗಳನ್ನು ಹೊಂದಿದೆ. ೨೮೮.೨೯ ಕೋಟಿ ಠೇವಣಿಗಳನ್ನು‌ ಹೊಂದಿದ್ದು, ೧೨೫.೭೩ ಕೋಟಿ ರೂ. ಸಾಲ ಪೂರೈಸಿದೆ ಎಂದು ಅವರು ತಿಳಿಸಿದರು.

Scroll to Top