ಸ್ವದೇಶಿ ವಸ್ತುಗಳ ಬಳಕೆ ಮಾಡೋಣ: ಚರಂತಿಮಠ

ಬಾಗಲಕೊಟೆ: ಮಹಾಭಾರತದ ರಾಮಾಯಣದ ಸಂಸ್ಕಾರ-ಸಂಸ್ಕೃತಿ ಮೂಲಕ ಭಾರತ ನಿರ್ಮಾಣಗೊಂಡಿರುವ ಭಾರತದಲ್ಲಿ ಸ್ವದೇಶಿ ಭಾವ ಜಾಗೃತವಾಗಲಿ, ಎಲ್ಲರೂ ಸ್ವದೇಶಿ ವಸ್ತುಗಳ ಬಳಿಕೆ ಮಾಡುವ ಮೂಲಕ ಗರ್ವದಿಂದ ಸ್ವದೇಶಿಗಳಾಗಿ ಬಾಳೋಣ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ವಿದ್ಯಾಗಿರಿಯ 6ನೇ ರಸ್ತೆಯಲ್ಲಿರುವ ಸಿ.ಎಸ್. ಬೆಂಬಳಗಿಯವರ ನಿವಾಸದಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ 125 ನೇ ಮನ್ ಕಿ ಬಾತ್ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಿ ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕರ್ತರು ಎಲ್ಲರು ಸ್ವದೇಶಿ ಬಟ್ಟೆ, ಅಹಾರ, ವಸ್ತುಗಳ ಬಳಿಕೆ ಮಾಡುವ ಸಂಕಲ್ಪ ಮಾಡೋಣ, ಜೀವನದ ಪ್ರತಿ ಹಂತದಲ್ಲೂ ಸ್ವದೇಶಿಮಯವಾಗಿರಲಿ ಎಂದರು.

ಕಾರ್ಯಕ್ರಮದಲ್ಲಿ ಬಸವರಾಜ ಬೆಂಬಳಗಿ, ಭೂತ ಅಧ್ಯಕ್ಷ ಸಂಗಮೇಶ ಲಾಯದಗುಂದಿ, ಸಂಗಪ್ಪ ಕುಪ್ಪಸ್ತ, ಎಸ್.ಆರ್.ಜಂಬಗಿ, ಸಿದ್ದಣ್ಣ ಶೆಟ್ಟರ, ಸಿದ್ದರಾಮಯ್ಯ ಮಠಪತಿ, ಸೋಮನಗೌಡ ಪಾಟೀಲ, ಶ್ರೀಧರ ಕುಂಟೋಜಿ, ಸಂಗಮೇಶ ಸಾತಿಹಾಳ,ಬಸವರಾ ಯಂಕಂಚಿ, ವಿ.ಬಿ.ಮಠ, ಅಶೋಕ ಬುಳ್ಳಾ, ಸಿ.ಜಿ.ದೊಡಮನಿ, ಸಂಗಮೇಶ ಸಾತಿಹಾಳ, ಅಶೋಕ ರೇಣುಕಪ್ಪ, ಕುಮಾರ ಜಿಗಜಿನ್ನಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಧಾನ ಮಂತ್ರಿ ಮನ್ ಕಿ ಬಾತ್ ಕಾರ್ಯಕ್ರಮದ ವಿಕ್ಷಣೆ ನಂತರ ಸ್ವದೇಶಿ ವಸ್ತಿಗಳ ಬಳಿಕೆಯ ಸಂಕಲ್ಪವನ್ನು ಮಾಡಲಾಯಿತು.

Scroll to Top